BPL Ration Card : ಹೊಸ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಸರ್ಕಾರದ ಕಡೆಯಿಂದ ಹೊಸದಾಗಿ 6 ರೂಲ್ಸ್ ! ಆ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು.

BPL Ration Card : ಹೊಸ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಸರ್ಕಾರದ ಕಡೆಯಿಂದ ಹೊಸದಾಗಿ 6 ರೂಲ್ಸ್  ! ಆ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು.

ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನತೆಗೆ ನಾವು ಈ ಮೂಲಕ ತಿಳಿಸಲು ಬಂದಿರುವುದೇನೆಂದರೆ ಒಂದು ವೇಳೆ ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಕಡ್ಡಾಯವಾಗಿ ನೀವು ಸರ್ಕಾರವು ಜಾರಿಗೆ ಮಾಡಿರುವಂತಹ ಈ 6 ರೂಲ್ಸ್‌ಗಳನ್ನು ನೀವು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಹಾಗಿದ್ದರೆ ಆ 6 ಹೊಸ ರೂಲ್ಸ್ ಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ವಿವರವಾಗಿ ನೀಡಿದ್ದೇವೆ. ಅದಕ್ಕಾಗಿ ನೀವು ಈ ಲೇಖನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ಸಾಕಷ್ಟು ಜನರು ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದಾರೆ. ಇದನ್ನು ಪಡೆದುಕೊಳ್ಳುವ ಮುಖ್ಯ ಉದ್ದೇಶ  ಏನೆಂದರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ನೀವು ಪಡೆದುಕೊಳ್ಳಬೇಕಾದರೆ ನಿಮಗೆ ಕಡ್ಡಾಯವಾಗಿ ರೇಷನ್ ಕಾರ್ಡ್ ಬೇಕೇ ಬೇಕಾಗುತ್ತದೆ. ಅದಕ್ಕಾಗಿ ಎಲ್ಲ ಜನರು ಈಗ ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಕಾದು ಕುಳಿತು ಕೊಂಡಿದ್ದಾರೆ. ಹಾಗಿದ್ದರೆ ಈಗ ಸರ್ಕಾರವು ಅವುಗಳನ್ನು ಮಾಡಿಸುವ ಸಮಯದಲ್ಲಿ ಕೆಲವೊಂದು ಹೊಸ ರೂಲ್ಸ್ ಗಳನ್ನು ಜಾರಿಗೆ ಮಾಡಿದೆ. ಹಾಗಾದರೆ ಆ 6 ಹೊಸ ರೂಲ್ಸ್ ಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.

ಹಾಗೆ ನಾವು ದಿನನಿತ್ಯವು ನಿಮಗೆ ಇದೇ ತರಹದ ಹೊಸ ಹೊಸ ಮಾಹಿತಿಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಗಳ ಬಗ್ಗೆ ಸಂಪೂರ್ಣವಾದ ವಿವರವನ್ನು ನಿಮಗೆ ನೀಡುತಲೇ ಇರುತ್ತೇವೆ. ಆ ಲೇಖನಗಳಲ್ಲಿ ನಾವು ನೀವು ಆ ಹುದ್ದೆಗಳ ವಿವರಗಳನ್ನು ಹಾಗೂ ಆ ಯೋಜನೆಗಳಿಗೆ ಅರ್ಜಿಯನ್ನು ನೀವು ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆಯೂ ಕೂಡ ಸಂಪೂರ್ಣವಾದ ರೀತಿಯಲ್ಲಿ ಮಾಹಿತಿಯನ್ನು ನೀಡಿರುತ್ತೇವೆ. ಹಾಗೆ ನಾವು ದಿನನಿತ್ಯ ಬರೆದು ಪೋಸ್ಟ್ ಮಾಡುವಂತ ಎಲ್ಲಾ ಲೇಖನಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಬೇಕಾದರೆ ನೀವು ನಮ್ಮ ಮಾಧ್ಯಮದ ನೋಟಿಫಿಕೇಷನ್ ಬಟನನ್ನು ಆನ್ ಮಾಡಿಕೊಳ್ಳಿ. ಹಾಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಕೂಡ ಜಾಯಿನ್ ಆಗಬಹುದು.

WhatsApp Group Join Now
Telegram Group Join Now

BPL  ರೇಷನ್ ಕಾರ್ಡ್ ನ ಮಾಹಿತಿ

ಹಾಗಿದ್ದರೆ ಇದೀಗ ಸ್ನೇಹಿತರೆ ಇವತ್ತಿನ ದಿನಮಾನಗಳಲ್ಲಿ ರೇಷನ್ ಕಾರ್ಡ್ ಒಂದು ಮಹತ್ವದ ದಾಖಲೆಯಾಗಿದೆ. ಅದರಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ರೇಷನ್ ಕಾರ್ಡ್ ಎಂದರೆ ಬಿಪಿಎಲ್ ರೇಷನ್ ಕಾರ್ಡ್ ನಿಮ್ಮ ಹತ್ತಿರ ಒಂದು ವೇಳೆ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರಗಳು ನೀಡುವಂತಹ ಯೋಜನೆಗಳನ್ನು ನೀವು ಪ್ರತಿ ತಿಂಗಳು ಏನಿಲ್ಲ ಅಂದರೂ ನೀವು 5000 ದಿಂದ 6000 ವರೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಬಿಪಿಎಲ್ ರೇಷನ್ ಕಾರ್ಡ್ ತುಂಬಾ ಮಹತ್ವವನ್ನು ಪಡೆದುಕೊಂಡಿದೆ.

ಇದೀಗ ನಿಮಗೆ ತಿಳಿದಿರುವಂತೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು ಪಡೆಯುವ ಸಮಯದಲ್ಲಿ ಕೂಡ ನೀವು ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಸರ್ಕಾರವು ನೀಡುವಂತಹ ವಿವಿಧ ರೀತಿಯ ಯೋಜನೆಗಳ ಲಾಭಗಳನ್ನು ನೀವು ಪಡೆದುಕೊಳ್ಳಬೇಕಾದರೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತದೆ.

ಹಾಗೆಯೇ ನಮ್ಮ ರಾಜ್ಯದಲ್ಲಿ ತುಂಬಾ ಜನರು ಅಕ್ರಮವಾಗಿ ಅಥವಾ ಸುಳ್ಳು ದಾಖಲಾತಿಗಳನ್ನು ನೀಡುವುದರ ಮೂಲಕ ಇದೀಗ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಮಾಡಿಸಲು ಜನರು ಇದೀಗ ಮುಗಿಬಿದ್ದಿದ್ದಾರೆ. ಇದನ್ನು ಕೂಡ ಸರ್ಕಾರವು ಗಮನದಲ್ಲಿಟ್ಟುಕೊಂಡು ಅದಕ್ಕೆ ಕೆಲವೊಂದಷ್ಟು ಶರತ್ತುಗಳನ್ನು ಇದೀಗ ವಿಧಿಸಿದೆ. ಅವುಗಳ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.

ರೇಷನ್ ಕಾರ್ಡನ್ನು ಪಡೆಯಲು ಜಾರಿಗೆ ತಂದಿರುವ 6 ಹೊಸ ರೂಲ್ಸ್ !

  • ಈಗ ನೀವು ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಹತ್ತಿರ 3 ಹೆಕ್ಟರ್ಗಿಂತ ಕಡಿಮೆ ಭೂಮಿಯನ್ನು ನೀವು ಹೊಂದಿರಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ 3 ಹೆಕ್ಟರ್ಗಿಂತ ಹೆಚ್ಚಿನ ಭೂಮಿಯನ್ನು ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ಗಳನ್ನು ರದ್ದು ಮಾಡುತ್ತಾರೆ.
  • ಹಾಗೆ ನೀವು ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಲು ನಗರ ಪ್ರದೇಶದಲ್ಲಿ ವಾಸ ಮಾಡುವಂತಹ ಜನರು 1000 ಅಡಿಗಿಂತ ಹೆಚ್ಚು ಜಾಗವನ್ನು ಹೊಂದಿರಬಾರದು. ಹಾಗೆ ಅವರು ದೊಡ್ಡ ಮನೆಯನ್ನು ಹೊಂದಿರಬಾರದು. ಆಗ ಮಾತ್ರ ನೀವು ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಬಹುದು.
  • ಹಾಗೆಯೇ ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಬಯಸುವಂತಹ ಕುಟುಂಬದಲ್ಲಿ ಯಾವುದೇ ರೀತಿಯ ವ್ಯಕ್ತಿಯು ಸರ್ಕಾರಿ ನೌಕರಿಯನ್ನು ಹೊಂದಿರಬಾರದು.
  • ಹಾಗೆಯೇ BPL ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಯಾವುದೇ ರೀತಿ ಆದಾಯ ತೆರಿಗೆಯನ್ನು ಕಟ್ಟುತ್ತಿರಬಾರದು. ಅಂತವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡನ್ನು ನೀಡುತ್ತಾರೆ.
  • ಅದೇ ರೀತಿಯಾಗಿ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಬಯಸುವಂತಹ ವ್ಯಕ್ತಿಯು ಕುಟುಂಬದಲ್ಲಿ ಸ್ವಂತ ಬಳಕೆಗಾಗಿ ವೈಟು ಬೋರ್ಡ್ ಕಾರನ್ನು ಅಥವಾ ಇತರ ವಾಹನಗಳನ್ನು ಹೊಂದಿರಬಾರದು.
  • ಹಾಗೆಯೇ ಬಿ ಪಿ ಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಯ ವಾರ್ಷಿಕ ಆದಾಯವು 1.50 ಲಕ್ಷಕ್ಕಿಂತ ಕೆಳಗಡೆ ಇರಬೇಕು.

ಇದೀಗ ನಾವು ಈ ಮೇಲೆ ತಿಳಿಸಿರುವ ಅಂತಹ ಈ 6 ರೂಲ್ಸ್ ಗಳನ್ನು ನೀವು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ನಿಮಗೆ ರೇಷನ್ ಕಾರ್ಡ್  ದೊರೆಯುತ್ತದೆ. ಒಂದು ವೇಳೆ ನೀವು ಈ ರೂಲ್ಸ್ ಗಳನ್ನು ಪಾಲಿಸದೆ ಹೋದರೆ ನೀವು ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಅರ್ಹರಿರುವುದಿಲ್ಲ.

BPL ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳೇನು ?

ಒಂದು ವೇಳೆ ನೀವೇನಾದರೂ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ಕಡ್ಡಾಯವಾಗಿ ನಾವು ಈ ಕೆಳಗೆ ನೀಡಿದಂತಹ ಎಲ್ಲಾ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಆಗ ಮಾತ್ರ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು.

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ನಾವು ಈ ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ನೀವು ತೆಗೆದುಕೊಂಡು ಹೋಗಿ ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. ಹಾಗೆ ನಾವು ಈ ಮೇಲೆ ತಿಳಿಸಿರುವ ದಾಖಲಾತಿಗಳಲ್ಲಿ ಒಂದು ದಾಖಲೆ ಇಲ್ಲವಾದರೂ ಕೂಡ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿರುವುದಿಲ್ಲ.

ಇದನ್ನು ಓದಿ :-  ಇದೀಗ ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಹೊಸ ಅಪ್ಡೇಟ್ ಈ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಪಾಲಿಸದೆ ಇದ್ದರೆ ಹಣವು ಜಮಾ ಆಗುವುದಿಲ್ಲ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಇದೀಗ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಕಾದು ಕುಳಿತಿದ್ದಾರೆ. ಆದರೆ ಸರ್ಕಾರವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಮತ್ತು ತಿದ್ದುಪಡಿಯನ್ನು ಮಾಡಲು ಈ ಕೆಳಗೆ ನೀಡಿದಂತಹ ಸೆಂಟರ್ ಗಳಿಗೆ ಮಾತ್ರ   ಅವಕಾಶವನ್ನು ನೀಡಿದೆ. ಹಾಗಾಗಿ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನಾವು ಈ ಕೆಳಗೆ ನೀಡಿರುವ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.

  • ಗ್ರಾಮ ಒನ್
  • ಕರ್ನಾಟಕ ಒನ್
  • ಬೆಂಗಳೂರು ಒನ್
  • ಬಾಪೂಜಿ ಸೇವಾ ಕೇಂದ್ರ
  • CSC ಕೇಂದ್ರಗಳಲ್ಲಿ

ನಾವು ಈ ಮೇಲೆ ತಿಳಿಸಿರುವ ಆನ್ಲೈನ್ ಸೆಂಟರ್ ಗಳಿಗೆ ಮಾತ್ರ ಹೋಗಿ ನೀವು ಬಿಪಿಎಲ್ ಹಾಗೂ ಹೊಸ ರೇಷನ್ ಕಾರ್ಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೆ ಸರ್ಕಾರ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ಬಿಡುಗಡೆ ಮಾಡಿದ ದಿನವೇ ಹೋಗಿ ನೀವು ಆನ್ಲೈನ್ ಸೆಂಟ್ರಲ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ನಾವು ಈ ಮೇಲೆ ತಿಳಿಸಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿದ್ದಕ್ಕಾಗಿ ಧನ್ಯವಾದಗಳು.

1 thought on “BPL Ration Card : ಹೊಸ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಸರ್ಕಾರದ ಕಡೆಯಿಂದ ಹೊಸದಾಗಿ 6 ರೂಲ್ಸ್ ! ಆ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು.”

Leave a Comment