Gruhalakshmi Yojana :- ಗೃಹಲಕ್ಷ್ಮಿಯರಿಗೆ ಮತ್ತಷ್ಟು ಬಲ ನೀಡಿದ ಸರ್ಕಾರ! ಈ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆ ಇಲ್ಲ ? ಶೀಘ್ರವೇ ಜೂನ್ ತಿಂಗಳ ಹಣ ಬಿಡುಗಡೆ! ಇಲ್ಲಿದೆ ಸಂಪೂರ್ಣ ಮಾಹಿತಿ.

Gruhalakshmi Yojana :- ಗೃಹಲಕ್ಷ್ಮಿಯರಿಗೆ ಮತ್ತಷ್ಟು ಬಲ ನೀಡಿದ ಸರ್ಕಾರ! ಈ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆ ಇಲ್ಲ ? ಶೀಘ್ರವೇ ಜೂನ್ ತಿಂಗಳ ಹಣ ಬಿಡುಗಡೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ಇದೀಗ ನಾವು ನಿಮಗೆ ಈ ಲೇಖನದ ಮೂಲಕ ಹೇಗೆ ತಿಳಿಸಲು ಬಂದಿರುವುದೇನೆಂದರೆ ಈಗ ಜೂನ್ ತಿಂಗಳ ಹಣವು ಇನ್ನು ಎರಡು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತಹ ಎಲ್ಲಾ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ. ಆದ್ದರಿಂದ ನೀವು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತೆ ಕಾಂಗ್ರೆಸ್ ಸರ್ಕಾರವು ಜಾರಿಗೆ ಮಾಡಿರುವಂತ ಯೋಜನೆಗಳಲ್ಲಿ ಒಂದಾದ ಯೋಜನೆ ಈ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ಅವರ ಖಾತೆಗಳಿಗೆ ಸರ್ಕಾರವು ಜಮಾ ಮಾಡುತ್ತಲೇ ಬರುತ್ತಿತ್ತು. ಈಗಾಗಲೇ ಅವರಿಗೆ ಹತ್ತು ಕಂತಿನ ಹಣವನ್ನು ಸರ್ಕಾರ ಅವರ ಖಾತೆಗಳಿಗೆ ಜಮಾ ಮಾಡಿದೆ. ಅದೇ ರೀತಿಯಾಗಿ ಈಗ ಎಲ್ಲ ಮಹಿಳೆಯರು 11ನೇ ಕಂತಿನ ಹಣವು ಯಾವಾಗ ಬರುತ್ತದೆ ಎಂದು ಎಲ್ಲರೂ ಕಾದು ಕೂತಿದ್ದಾರೆ. ಅಂತವರಿಗೆ ಇದೊಂದು ಸಂತಸದ ಸುದ್ದಿ ಎಂದು ಹೇಳಬಹುದು. ಆ ಸಂತಸದ ಸುದ್ದಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿದ್ದೇವೆ.

ಹಾಗೆ ನಾವು ದಿನನಿತ್ಯವು ನಮ್ಮ ಈ ಹೊಸ ಕಿರಣ ಜಾಲತಾಣದ ಮೂಲಕ ನಿಮಗೆ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಮನೆಯಲ್ಲಿರುವ ಮಹಿಳೆಯರಿಗೆ ಸಹಾಯವಾಗುವಂತ ಎಲ್ಲಾ ರೀತಿಯ ಹೊಸ ಹೊಸ ಯೋಜನೆಗಳು ಮತ್ತು ಹೊಸ ಹೊಸ ರೂಲ್ಸ್ ಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ನಾವು ದಿನನಿತ್ಯ ಲೇಖನಗಳ ಮೂಲಕ ನಿಮಗೆ ಮಾಹಿತಿಯನ್ನು ಒದಗಿಸುತ್ತೇವೆ. ಹಾಗೆ ನೀವು ದಿನನಿತ್ಯವು ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನೀಡುವ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಶೀಘ್ರವೇ ಬಿಡುಗಡೆ 

ಈಗ ತಿಳಿದುಬಂದಿರೋ ಮಾಹಿತಿ ಪ್ರಕಾರ ಜೂನ್ ತಿಂಗಳ ಹಣ ಎರಡು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗೆ ಜುಲೈ ತಿಂಗಳಿನ ಹಣವು ಜುಲೈ 15 ತಾರೀಖಿನ ಒಳಗಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ. ಇದೀಗ ಶನಿವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದಂತೆ ಅವರು ಕಳೆದ ಮೇ 5 ರಂದು ಕೊನೆಯದಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗಿತ್ತು.

ಆದರೆ ಈಗ ಜೂನ್ ಮತ್ತು ಜುಲೈ ಎರಡು ತಿಂಗಳ ಗೃಹಲಕ್ಷ್ಮಿ ಹಣವು ಇನ್ನೂ ಬಂದಿಲ್ಲ. ಆದರೆ ಈಗಾಗಲೇ ಎಸ್ ಸಿ/ ಎಸ್ ಟಿ ಫಲಾನುಭವಿಗಳಿಗೆ ಬಂದಿದೆ. ಹಾಗೆ ಇನ್ನು ಉಳಿದಂತಹ ಮಹಿಳೆಯರಿಗೂ ಕೂಡ ಶೀಘ್ರದಲ್ಲಿ ಡಿ ಬಿ ಟಿ ಮೂಲಕ ಹಣವನ್ನು ಜಮಾ ಮಾಡಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಕೆ

ಇದೀಗ ಸರ್ಕಾರವು ನೀಡುತ್ತಿರುವಂತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯು ನಿಲ್ಲುವುದಿಲ್ಲ. ಈ ಯೋಜನೆ ಅಡಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದೆ. ಆ ಅರ್ಜಿಗಳನ್ನು ಕೂಡ ಪರಿಶೀಲನೆ ಮಾಡಲು ಸರಕಾರವು ನಿರ್ಧಾರವನ್ನು ಮಾಡಿದೆ.

ಹಾಗೆ ಈ ಹಿಂದೆ ಲೋಕಸಭೆ ಚುನಾವಣೆಯಿದ್ದ ಕಾರಣ ಆ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಸಿದಂತಹ ಮಹಿಳೆಯರ ಅರ್ಜಿಗಳನ್ನು ಪರಿಶೀಲನೆ ಮಾಡಿರಲಿಲ್ಲ. ಅಂಥವರ ರೇಷನ್ ಕಾರ್ಡ್ ಗಳನ್ನು ಸರ್ಕಾರ ಈಗ ಪರಿಶೀಲನೆ ಮಾಡಿ ಅವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯನ್ನು ಪ್ರಯೋಜನ ದೊರೆಯುವಂತೆ ಮಾಡಲು ಮುಂದಾಗಿದೆ.

ಗೃಹಲಕ್ಷ್ಮಿ

ಗೃಹಲಕ್ಷ್ಮಿ ಹಣವು ಜಮಾ ಆಗದೆ ಇದ್ದರೆ ಏನು ಮಾಡಬೇಕು ?

ನಿಮ್ಮ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗದೆ ಇದ್ದರೆ ನೀವು ನಿಮ್ಮ ಖಾತೆಗಳಿಗೆ NPCI ಮ್ಯಾಪಿಂಗ್ ಆಗಿದೆ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಖಾತೆಗಳಿಗೆ NPCI ಮ್ಯಾಪಿಂಗ್ ಆಗದೆ ಇದ್ದರೆ ನೀವು ತಕ್ಷಣವೇ ಅದನ್ನು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಅದನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಅನ್ನು ಮಾಡಿಸಿದ ಇದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ಬಂದು ಜಮಾ ಆಗುವುದಿಲ್ಲ. ಆದಕಾರಣ ನೀವು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗನ್ನು ಮಾಡಿಸಿಕೊಳ್ಳುವುದು ಉತ್ತಮ.

ಹಾಗೆ ನೀವು ನಿಮ್ಮ ರೇಷನ್ ಕಾರ್ಡ್ ಗೆ EKYC  ಕೂಡ ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ EKYC ಆಗಿದೆ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಆಗದೆ ಇದ್ದರೆ ನೀವು ಅದನ್ನು ನಿಮ್ಮ ಹತ್ತಿರ ಇರುವಂತಹ ಆಹಾರ ಕೇಂದ್ರಕ್ಕೆ ಹೋಗಿ ನೀವು EKYC ಮಾಡಿಸಿಕೊಳ್ಳಬಹುದಾಗಿದೆ. ನೀವು ನಿಮ್ಮ ರೇಷನ್ ಕಾರ್ಡ್ ಗೆ E KYC  ಮಾಡಿಸಿದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆಯನ್ನು ಬಂದು ತಲುಪುತ್ತದೆ.

ಹಾಗೆ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಿಕೊಡಬೇಕಾಗುತ್ತದೆ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಗೆ ಲಿಂಕ್ ಇರುವಂತಹ ಆಧಾರ್ ಕಾರ್ಡ್ ನೀವು ಮಾಡಿಸಿ ಹತ್ತು ವರ್ಷಗಳ ಆದರೂ ಕೂಡ ನೀವು ಅದನ್ನು ಅಪ್ಡೇಟ್ ಮಾಡಿಸದೆ ಇದ್ದರೆ ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿದ ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯನ್ನು ಬಂದು ದೊರಕುತ್ತದೆ.

ಹಾಗೆ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆ ಗೆ ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಥಿತಿ ಹೇಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಅದರಲ್ಲೂ ಕೂಡ ನಿಮ್ಮ KYC ಆಗದೆ ಇದ್ದರೆ ನೀವು ಅದನ್ನು ಕೂಡ ಮಾಡಿಸಿಕೊಳ್ಳಬೇಕಾಗುತ್ತದೆ. ಆಗ ನಿಮಗೆ ಗೃಹಲಕ್ಷ್ಮಿ ಯೋಜನೆಯನ್ನು ಬಂದು ತಲುಪುತ್ತದೆ.

ನಾವು ಈ ಮೇಲೆ ತಿಳಿತಿರುವಂತ ಎಲ್ಲಾ ದಾಖಲೆಗಳು ನೀವು ಸರಿಯಾದ ರೀತಿಯಲ್ಲಿ ಇದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪುತ್ತದೆ. ಇದರಲ್ಲಿ ಒಂದು ಅಂಶ ಕೂಡ ನೀವು ಮಾಡಿಸದೆ ಇದ್ದರೆ ನಿಮಗೆ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನಾ ಹಣವು ಬಂದು ತಲುಪುವುದಿಲ್ಲ. ಆದ್ದರಿಂದ ನಾವು ಈ ಮೇಲೆ ನೀಡಿರುವ ಮಾಹಿತಿ ನೀವು ಕೊನೆವರೆಗೂ ಓದಿಕೊಂಡು ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ.

ಅದೇ ರೀತಿಯಾಗಿ ಸರ್ಕಾರವು ಈಗ ನೀಡಿದ ಮಾಹಿತಿ ಪ್ರಕಾರ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತ ಮಾಡುವುದಿಲ್ಲ. ಈ ಯೋಜನೆಗಳು 5 ವರ್ಷಗಳ ಕಾಲ ನಿರಂತರವಾಗಿ ನಡೆಯುತ್ತದೆ. ಆದ ಕಾರಣ ಯಾರೂ ಕೂಡ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಂದು ಎಲ್ಲ ಮಹಿಳೆಯರ ಖಾತೆಗಳಿಗೆ ತಲುಪುತ್ತದೆ.

ಇದನ್ನು ಓದಿ : Ration Card Applying News : ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗೆ ಅವಕಾಶ ನೀಡಿದ ಸರಕಾರ! ಇಲ್ಲಿದೆ ಅರ್ಜಿ ಸಲ್ಲಿಸುವ ಲಿಂಕ

ಒಂದು ವೇಳೆ ನಾವು ಈ ಮೇಲೆ ನೀಡುವಂತಹ ಮಾಹಿತಿ ನಿಮಗೆ ಸರಿಯಾದ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.

1 thought on “Gruhalakshmi Yojana :- ಗೃಹಲಕ್ಷ್ಮಿಯರಿಗೆ ಮತ್ತಷ್ಟು ಬಲ ನೀಡಿದ ಸರ್ಕಾರ! ಈ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆ ಇಲ್ಲ ? ಶೀಘ್ರವೇ ಜೂನ್ ತಿಂಗಳ ಹಣ ಬಿಡುಗಡೆ! ಇಲ್ಲಿದೆ ಸಂಪೂರ್ಣ ಮಾಹಿತಿ.”

Leave a Comment