Ration Card Update :-ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ! ರೇಷನ್ ಕಾರ್ಡ್ ಮಾಡಿಸಲು ಅರ್ಜಿಗಳು ಸ್ವೀಕಾರ ! ಇಲ್ಲಿದೆ ಸಂಪೂರ್ಣ ಮಾಹಿತಿ !

Ration Card Update :-  ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ರೇಷನ್ ಕಾರ್ಡ್ ಮಾಡಿಸಲು ಅರ್ಜಿಗಳು ಸ್ವೀಕಾರ! ಇಲ್ಲಿದೆ ಸಂಪೂರ್ಣ ಮಾಹಿತಿ ?

ಕರ್ನಾಟಕ ಜನತೆಗೆ ನಮಸ್ಕಾರಗಳು ಇದೀಗ ನಮ್ಮ ಮಾಧ್ಯಮದಲ್ಲಿ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ. ಈ ಲೇಖನದ ಮೂಲಕ ಕರ್ನಾಟಕದ ಜನತೆಗೆ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ಬಗ್ಗೆ ಅಪ್ಡೇಟ್ ಹಾಗೂ ಹೊಸ ರೇಷನ್ ಕಾರ್ಡ್ ಗಳ ಅರ್ಜಿಯನ್ನು ಸ್ವೀಕಾರ ಮಾಡುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಒಂದು ವೇಳೆ ಈ ಲೇಖನವು ಇಷ್ಟವಾದರೆ ನಿಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಅದೇ ರೀತಿಯಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ.

ಸ್ನೇಹಿತರೆ ನಾವು ಇದೀಗ ಈ ಮಾಧ್ಯಮದಲ್ಲಿ ದಿನವೂ ಇದೇ ತರಹದ ಹೊಸ ಹೊಸ ಯೋಜನೆಗಳ ವಿವರಗಳು ಹಾಗೂ ಈ ಯೋಜನೆಗಳಿಗೆ ಯಾವ ರೀತಿಯಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಹಾಗೆ ಸರ್ಕಾರದ ಕಡೆಯಿಂದ ಬರುವಂತೆ ಎಲ್ಲಾ ಹುದ್ದೆಗಳ ವಿವರಗಳು ಕೂಡ ಈ ಮಾಧ್ಯಮದಲ್ಲಿ ದಿನನಿತ್ಯವು ನಾವು ಬರೆದು ಪೋಸ್ಟ್ ಮಾಡುತ್ತಿರುತ್ತೇವೆ.  ಅಷ್ಟೇ ಅಲ್ಲದೆ ನೀವು ನಮ್ಮ ಸೈಟ್ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ, ನೀವು ಸೈಟ್ ನೋಟಿಫಿಕೇಷನ್ ಬಟನ್ ಆನ್ ಮಾಡಿಕೊಳ್ಳುವುದರಿಂದ ನಾವು ಹಾಕುವ ಎಲ್ಲಾ ಪೋಸ್ಟ್ಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಲು ಸಹಾಯವಾಗುತ್ತದೆ.

WhatsApp Group Join Now
Telegram Group Join Now

ಇದೀಗ ನಮ್ಮ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೇಷನ್ ಕಾರ್ಡಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ. ಆದರೆ ಒಂದು ಕಡೆ ತಮ್ಮಕೆಲವು ಜನರು ಬಳಿ ಇರುವಂತ ಬಿಪಿಎಲ್ ರೇಷನ್ ಕಾರ್ಡ್ ಗಳು ಇನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ರೇಷನ್ ಕಾರ್ಡ್ ಗಳನ್ನು ಕಳೆದುಕೊಂಡಿದ್ದಾರೆ ಅಂದರೆ ಅಂತಹ ರೇಷನ್ ಕಾರ್ಡ್ ಗಳನ್ನು ಸರ್ಕಾರ ಈಗ ರದ್ದುಪಡಿಸಲು ಪ್ರಾರಂಭ ಮಾಡಿದೆ.

ಅಷ್ಟೇ ಅಲ್ಲದೆ ಇನ್ನೊಂದು ಕಡೆಯಿಂದ ಇನ್ನೂ ಕೆಲವೊಂದಷ್ಟು ಜನರು ಅರ್ಜಿಯನ್ನು ಸಲ್ಲಿಸಿ ರೇಷನ್ ಕಾರ್ಡ್ ಗಾಗಿ ಕಾದು ಕುಳಿತಿದ್ದಾರೆ. ಆದರೆ ಇನ್ನೂ ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ಮಾಡಲಾಗುವುದು ಎಂದು ಆಹಾರ ಇಲಾಖೆ ಈಗಾಗಲೇ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದೆ.

ಈಗ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿ ಬಹುದು !

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಅಧಿಕ ಅಧಿಕಾರಕ್ಕೆ ಬಂದ ನಂತರ ಕೆಲವೊಂದಷ್ಟು ಗ್ಯಾರಂಟಿಗಳನ್ನು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲ ಯೋಜನೆಗಳು ಸಾಮಾನ್ಯರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಅಂತಹ ಬಡ ಕುಟುಂಬಗಳಿಗೆ ತುಂಬಾ ಸಹಾಯವಾಗಿದೆ.

ಅಷ್ಟೇ ಅಲ್ಲದೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಎಲ್ಲರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರಬೇಕು. ಒಂದು ವೇಳೆ ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲದಿದ್ದರೆ ನೀವು ಯಾವುದೇ ರೀತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತದೆ.

ಇದೀಗ ಸರ್ಕಾರವು ಈಗಾಗಲೇ ಅರ್ಜಿಯನ್ನು ಸಲ್ಲಿಸಿ ತಮ್ಮ ರೇಷನ್ ಕಾರ್ಡ್ ಬರುವಿಕೆಗಾಗಿ ಕಾಯುತ್ತಿರುವ ಅಂತಹ ಅಭ್ಯರ್ಥಿಗಳಿಗೆ ಸರ್ಕಾರ ಇದೀಗ ಒಂದು ಗುಡ್ ನ್ಯೂಸ್ ಅನ್ನು ನೀಡಿದೆ. ಕಳೆದ ಎರಡುವರೆ ವರ್ಷಗಳಿಂದ ವಿತರಣೆ ಆಗದೆ ಇರುವಂತಹ ಮೂರು ಲಕ್ಷದಷ್ಟು ಹೊಸ ಪಡಿತರ ಕಾರ್ಡ್ಗಳನ್ನು ವಿತರಣೆ ಮಾಡಲು ಸರಕಾರ ಇದೀಗ ತೀರ್ಮಾನವನ್ನು ತೆಗೆದುಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವುದಾಗಿ ಆಹಾರ ಇಲಾಖೆಯು ಮಾಹಿತಿಯನ್ನು ನೀಡಿದೆ.

ರೇಷನ್ ಕಾರ್ಡ್

ಇದೀಗ ಅರ್ಜಿಯನ್ನು ಸಲ್ಲಿಸಿದಂತಹ ಅಭ್ಯರ್ಥಿಗಳಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳು ಅವುಗಳನ್ನು ಫಲಾನುಭವಿಗಳ ಆದಾಯಕ್ಕೆ ತಕ್ಕಂತೆ ವಿತರಣೆ ಮಾಡಲಾಗುವುದು ಎಂದು ಸರ್ಕಾರ ಎಂದು ಮಾಹಿತಿ ನೀಡಿದೆ.

ಹಾಗಾದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದೇ ?

ಇದೀಗ ನೀವು ಹೊಸದಾಗಿ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಅದರ ಜೊತೆಗೆ ತಿದ್ದುಪಡಿಯನ್ನು ಮಾಡಿಕೊಳ್ಳಬಹುದು. ಎಲ್ಲ ಕೆಲಸವನ್ನು ಮಾಡಿಕೊಳ್ಳಲು ಸರಕಾರ ಇದೀಗ ಅವಕಾಶವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವು ನಿಮ್ಮ ಹತ್ತಿರ ಇರುವಂತ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಡತನ ಚೀಟಿಯಲ್ಲಿ ಅಗತ್ಯ ಇರುವ ನವೀಕರಣವನ್ನು ಕೂಡ ನೀವು ಮಾಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ಸರ್ಕಾರವು ನೀಡುವಂತಹ ಅಭ್ಯರ್ಥಿಗಳ ಬಗ್ಗೆ ಮಾಹಿತಿಗಳನ್ನು ನೀವು ದಿನಾಲು ಚೆಕ್ ಮಾಡಿಕೊಂಡು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳೇನು ?

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್
  • ವಿಳಾಸದ ಪುರಾವೆಗಳು

ಅಷ್ಟೇ ಅಲ್ಲದೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಆ ಸೇವಾ ಕೇಂದ್ರಕ್ಕೆ ಹೋಗಬೇಕು.

ಈಗಾಗಲೇ ಕೆಲವೊಂದಷ್ಟು ಜಿಲ್ಲೆಗಳಲ್ಲಿ ಪಡಿತರ ಚೀಟಿಗೆ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದೆ. ಆದ್ದರಿಂದ ನೀವು ನಿಮ್ಮ ಹತ್ತಿರ ಇರುವಂತ ಸೇವಾಕೇಂದ್ರಗಳಲ್ಲಿ ಮಾಹಿತಿ ಪಡೆದುಕೊಂಡು ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಿದ್ದುಪಡಿಯನ್ನು ಮಾಡಿಸಬಹುದು.

ಹಾಗಾದರೆ ರೇಷನ್ ಕಾರ್ಡನ್ನು ಕ್ಯಾನ್ಸಲ್ ಮಾಡಲು ಕಾರಣಗಳೇನು ?

ಇದೀಗ ನಿಮಗೆ ಈಗಾಗಲೇ ತಿಳಿದಿರುವಂತೆ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಗಳನ್ನು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನೀಡಲಾಗುತ್ತದೆ. ಏಕೆಂದರೆ ಈ ಕಾರ್ಡ್ ಗಳ ಮೂಲಕ ನೀವು ಹಲವಾರು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬಹುದು ಆದ್ದರಿಂದ ಈ ಕಾರ್ಡ್ ಗಳನ್ನು ಮಾಡಿಸಿರುತ್ತಾರೆ.

ಅದೇ ರೀತಿಯಾಗಿ ಕೆಲವೊಂದಿಷ್ಟು ಜನರು ಬಡತನ ರೇಖೆಗಿಂತ ಮೇಲಿರುವರು ಕೂಡ ಈ BPL  ರೇಷನ್ ಕಾರ್ಡ್ಗಳನ್ನು ಮಾಡಿಸಿದ್ದಾರೆ. ಆದ ಕಾರಣ ಸರ್ಕಾರ ಅಂತವರನ್ನು ಗುರುತಿಸಿ ಈಗ ಅವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದೆ.

ಇದೀಗ ಶ್ರೀಮಂತರು ಹಾಗೂ ಬಡತನ ರೇಖೆಗಿಂತ ಮೇಲಿರುವಂತ ಕುಟುಂಬದವ್ಯ ರೇಶನ್ ಕಾರ್ಡ್ಗಳನ್ನು ಸರ್ಕಾರವು ಗುರುತಿಸುವವನು ಕ್ಯಾನ್ಸಲ್ ಮಾಡಲು ಈಗಾಗಲೇ ಕ್ರಮವನ್ನು ಜಾರಿಗೆ ಗೊಳಿಸಿದೆ .ಅದೇ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ಆಗಬಾರದು ಎಂದರೆ ನೀವು ಕೆಲವೊಂದು ರೂಲ್ಸ್ ಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಒಂದು ವೇಳೆ ನೀವು ಆ ರೂಲ್ಸ್ ಗಳನ್ನು ಪಾಲನೆ ಮಾಡಿದೆ ಹೋದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಸರ್ಕಾರವು ಆದೇಶವನ್ನು ನೀಡಿದೆ.

ಇದನ್ನು ಓದಿ  :- JOB NEWS

ಹಾಗಾದರೆ ರೇಷನ್ ಕಾರ್ಡ್ ರೂಲ್ಸ್ ಗಳೇನು ?

ಒಂದು ವೇಳೆ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡನ್ನು ನೀವು ಹೊಂದಿದ್ದರೆ ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ ಎಲ್ಲಾ ಸದಸ್ಯರು ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಒಂದು ವೇಳೆ ನೀವು ಕೆವೈಸಿ ಮಾಡಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.

ಅದೇ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇದ್ದಂತವರ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಅನ್ನು ನೀವು ರೇಷನ್ ಕಾರ್ಡ್ ಗೆ ಮಾಡಿಸಬೇಕಾಗುತ್ತದೆ. ನೀವು ಮಾಡಿಸದೆ ಇದ್ದರೆ ಕೂಡ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.

ಅದೇ ರೀತಿಯಾಗಿ ರೇಷನ್ ಕಾರ್ಡನ್ನು ಹೊಂದಿದಂತಹ ಪ್ರತಿ ಕುಟುಂಬಗಳು ಮೂರು ತಿಂಗಳಗಳ ಕಾಲ ಯಾವುದೇ ರೀತಿಯ ರೇಷನ್ ಅನ್ನು ಪಡೆಯದ್ದಿದ್ದರೆ ಅಂತ ಕಾರ್ಡನ್ನು ತಾತ್ಕಾಲಿಕವಾಗಿ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಸರ್ಕಾರ  ಈಗ ಮಾಹಿತಿಯನ್ನು ನೀಡಿದೆ.

ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಅನ್ನು ಹೊಂದಿದಂತಹ ಪ್ರತಿ ಕುಟುಂಬಗಳು ಆರು ತಿಂಗಳವರೆಗೆ ಯಾವುದೇ ರೀತಿಯ ರೇಷನ್ ಅಥವಾ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಹೋಗದಿದ್ದರೆ ಅಂಥವರ ರೇಷನ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ.

ಅದೇ ರೀತಿಯಾಗಿ ನೀವು ಈ ಮೇಲೆ ನಡೆದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಒಂದು ವೇಳೆ ನೀವು ಈ ನಿಯಮಗಳನ್ನು ಪಾಲಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಡಿಲೀಟ್ ಮಾಡಲಾಗುತ್ತದೆ ಎಂದು ಸರ್ಕಾರವು ಅಧಿಕೃತವಾಗಿ ಘೋಷಣೆಯನ್ನು ಮಾಡಿದೆ.

ನೀವು ನಿಮ್ಮ ರೇಷನ್ ಕಾರ್ಡ್ ಗೆ ಈ ಕೆವೈಸಿ ಅಥವಾ ಆಧಾರ್ ಕಾರ್ಡನ್ನು ಲಿಂಕ್ ಮಾಡಿಕೊಳ್ಳಲು ನಿಮ್ಮ ಹತ್ತಿರ ಇರುವಂತ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ನೀವು ಕೆವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಕೊಳ್ಳಬಹುದು.

ರೇಷನ್ ಕಾರ್ಡ್ ಕ್ಯಾನ್ಸಲ್ ಲಿಸ್ಟ್ ಚೆಕ್ ಮಾಡುವುದು ಹೇಗೆ ?

ಮೊದಲಿಗೆ ನೀವು ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲನ ಲಿಸ್ಟ್ ಅನ್ನು ನೀವು ನೋಡಬೇಕಾದರೆ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.

ಮೊದಲಿಗೆ ನೀವು ಈ ಮೇಲೆ ನೀಡುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಎಡ ಭಾಗದಲ್ಲಿ ಮೆನು ಆಪ್ಷನ್ ಅನ್ನು ಕಾಣುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರದಲ್ಲಿ ಪಡಿತರ ಸೇವೆಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ನಿಮಗೆ ರೇಷನ್ ಕಾರ್ಡ್ ರದ್ದಾದ ಪಟ್ಟಿ ಅಥವಾ ತಡೆಹಿಡಿಯಲಾದ ಪಡಿತರ ಚೀಟಿ ವಿವರಗಳು ಎಂದು ನಿಮ್ಮ ಮುಂದೆ ಕಾಣುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರ ನಿಮ್ಮ ಮುಂದೆ ಒಂದು ಲಿಸ್ಟ್ ಕಾಣುತ್ತದೆ, ಆ ಲಿಸ್ಟಿನಲ್ಲಿ ನಿಮ್ಮ ಹೆಸರಿಗೆ ಇಲ್ಲವೇ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದು.

ಈ ಮೇಲೆ ನೀಡುವ ಮಾಹಿತಿ ಪ್ರಕಾರ ನೀವು ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

ಈಗ ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿ ಅನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅದೇ ರೀತಿಯಾಗಿ ನಮ್ಮ ಸೈಟ್ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ.

1 thought on “Ration Card Update :-ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ! ರೇಷನ್ ಕಾರ್ಡ್ ಮಾಡಿಸಲು ಅರ್ಜಿಗಳು ಸ್ವೀಕಾರ ! ಇಲ್ಲಿದೆ ಸಂಪೂರ್ಣ ಮಾಹಿತಿ !”

Leave a Comment